| ಆಗಾಗಿನ
ಸ್ಪಂದನಾ ಪ್ರಶ್ನಾವಳಿ (ಎಫ್ ಎ ಕ್ಯು ಸ್) |
|
|
| |
|
|
| |
|
|
| |
|
|
| |
|
|
| |
|
|
| |
|
|
| |
| ಜಾಲತಾಣದಲ್ಲಿ ನೋಂದಾಯಿಸಲು ನನ್ನಿಂದ ಸಾಧ್ಯವಾಗಿಲ್ಲ. ನಾನು ಏನು ಮಾಡಬೇಕು ?
|
ಉತ್ತರ: ನೀವು ನೋಂದಾಯಿಸಲು ಪ್ರಯತ್ನಿಸುತ್ತಿರುವ ತಾಣದ ಯುಆರ್ಎಲ್ ಜೊತೆಗೆ ಸಂಪೂರ್ಣ ದೋಷ ಸಂದೇಶವನ್ನು info@ildc.in ಗೆ ವಿಅಂಚೆಯಲ್ಲಿ ಕಳುಹಿಸಿ. ಇದರೊಂದಿಗೆ ನೀವು ನೋಂದಣಿಯ ಸಮಯದಲ್ಲಿ ಅನುಸರಿಸಿದ ಹಂತಗಳನ್ನು ಸಹ ಒದಗಿಸಿ. ಇದರಿಂದಾಗಿ ನೋಂದಣಿ ಪುಟದಲ್ಲಿ(ಗಳಲ್ಲಿ) ಯಾವುದೆ ತೊಂದರೆಗಳಿದ್ದಲ್ಲಿ ಅವನ್ನು ಪರಿಹರಿಸಲು ನಮಗೆ ಸಹಾಯವಾಗುತ್ತದೆ.
| |
| |
|
|
| |
|
|
| |
| ಭಾರತೀಯ ಓಪನ್ ಆಫೀಸ್ ಎಂದರೇನು ? ಸಾಮಾನ್ಯ ಮನುಷ್ಯನಿಗೆ ಅದರಿಂದಾಗುವ ಪ್ರಯೋಜನಗಳೇನು?
|
| ಉತ್ತರ: ಭಾರತೀಯOO ಸೂಟ್ ಮುಖ್ಯವಾಗಿ ಒಂದು ಪದ ಸಂಸ್ಕಾರಕ ಅನ್ವಯಿಕ (ರೈಟರ್), ಒಂದು ಲೆಕ್ಕದ ಹಾಳೆ ಅನ್ವಯಿಕ (ಕ್ಯಾಲ್ಕ್), ಒಂದು ಪ್ರಸ್ತುತಿ ಅನ್ವಯಿಕ (ಇಂಪ್ರೆಸ್), ಹಾಗು ಒಂದು ಚಿತ್ರರಚನಾ ಅನ್ವಯಿಕವನ್ನು(ಡ್ರಾ) ಹೊಂದಿದೆ. ಭಾರತೀಯOO ಸೂಟ್ ಎನ್ನುವುದು ಓಪನ್ ಆಫೀಸ್‌ನ ಒಂದು ಕಸ್ಟಮೈಸ್ ಆವೃತ್ತಿಯಾಗಿದ್ದು, ಅದರಲ್ಲಿನ ಎಲ್ಲಾ ಪರಿವಿಡಿಗಳು, ಸ್ಥಿತಿ ಪಟ್ಟಿಕೆಗಳು, ಬಳಕೆದಾರ ಪ್ರಾಂಪ್ಟುಗಳು ಹಾಗು ಇತ್ಯಾದಿಗಳನ್ನು ಭಾರತೀಯ ಭಾಷೆಗಳಿಗೆ ಅನುವಾದಿಸಲಾಗಿದೆ. ಪ್ರತಿಯೊಂದು ಭಾರತೀಯOO ಅನ್ವಯಿಕಗಳಲ್ಲಿಯೂ ಸಹ ಒಂದು ಸಹಾಯದ ಪರಿವಿಡಿ ಇರುತ್ತದೆ. ಇದರಲ್ಲಿರುವ ಭಾರತೀಯ ಭಾಷೆ ಗಳಲ್ಲಿನ ಸಹಾಯದ ಆಯ್ಕೆಗಳನ್ನು ಅನ್ವಯಿಕದ ಹಲವಾರು ಉಪಕರಣಗಳು ಹಾಗು ಆದೇಶಗಳಿಗಾಗಿ ಸಹಾಯವನ್ನು ಪಡೆದುಕೊಳ್ಳಲು ಬಳಸಬಹುದಾಗಿದೆ.
| |
| |
| ಫೈರ್ಫಾಕ್ಸ್ ಎಂದರೇನು?
|
| ಉತ್ತರ: ಫೈರ್ಫಾಕ್ಸ್ ಎಂಬುದು ಮೋಝಿಲ್ಲಾದಿಂದ ಅಭಿವೃದ್ಧಿಪಡಿಸಲಾದ, ಮುಕ್ತ-ಆಕರದ, ವಿಂಡೋಸ್, ಲಿನಕ್ಸ್, ಹಾಗು ಮ್ಯಾಕ್ OS X ಗಾಗಿನ ಜಾಲ ವೀಕ್ಷಕವಾಗಿದೆ . ಇದರ ಇತ್ತೀಚಿನ ಒಂದು ಆವೃತ್ತಿಯನ್ನು ಫೈರ್ಫಾಕ್ಸ್ ಜಾಲತಾಣದಿಂದ ನಕಲಿಳಿಸಿಕೊಳ್ಳಬಹುದಾಗಿದೆ. ಭಾರತೀಯ ಭಾಷೆಗಳಲ್ಲಿರುವ ಫೈರ್ಫಾಕ್ಸಿನ ಆವೃತ್ತಿಯನ್ನು ಪ್ರತಿಯೊಂದು ಭಾಷಾ ಸೀಡಿಯಲ್ಲಿಯೂ ಸಹ ಒಳಗೊಳ್ಳಿಸಲಾಗಿದೆ.
| |
| |
| ತಂಡರ್ಬರ್ಡ್ ಎಂದರೇನು?
|
| ಉತ್ತರ: ತಂಡರ್ಬರ್ಡ್ ಎನ್ನುವುದು ವಿಂಡೋಸ್, ಲಿನಕ್ಸ್, ಹಾಗು ಮ್ಯಾಕಿಂಟೋಶ್ ಮುಂತಾದ ಹೆಚ್ಚಿನ ಕಾರ್ಯವ್ಯವಸ್ಥೆಗಳಲ್ಲಿ ಬಳಸಲಾಗುವ ಉಚಿತ, ಮುಕ್ತ-ಆಕರ ಹಾಗು ಕ್ರಾಸ್-ಪ್ಲಾಟ್‌ಫಾರ್ಮ್ ಅಂಚೆ ಗ್ರಾಹಕವಾಗಿದೆ. ಇದು ಮೋಝಿಲ್ಲಾದ ಕೋಡ್‌ಬೇಸ್‌ನ ಮೇಲೆ ಆಧಾರಿತವಾಗಿದೆ. ಇದು ಒಂದು ಸದೃಢ ಹಾಗು ಸುಲಭವಾಗಿ ಬಳಸಲಾದಂತಹ ಒಂದು ಗ್ರಾಹಕವಾಗಿದ್ದು,ಇದರ ಪ್ರತಿಸ್ಪರ್ಧಿ ಉತ್ಪನ್ನಗಳಾದಂತಹ ಔಟ್‌ಲುಕ್ ಎಕ್ಸಪ್ರೆಸ್ ಅನ್ನು ಹೋಲುವಂತಿದ್ದರೂ ಸಹ ರದ್ದಿ ಅಂಚೆ ವರ್ಗೀಕರಣದಂತಹ ಪ್ರಮುಖ ಅನುಕೂಲವನ್ನು ಹೊಂದಿದೆ. ಸ್ಥಳೀಯ ಭಾಷೆಯ ಆವೃತ್ತಿಯ ತಂಡರ್ಬರ್ಡ್ ಅನ್ನು ಪ್ರತಿಯೊಂದು ಭಾಷಾ ಸೀಡಿಯಲ್ಲಿಯೂ ಸಹ ಒಳಗೊಳ್ಳಿಸಲಾಗಿದೆ.
| |
| |
| ಪಿಡ್ಜಿನ್ ಎಂದರೇನು ?
|
| ಉತ್ತರ: ಪಿಡ್ಜಿನ್ ಒಂದು ಲಕ್ಷಾಂತರ ಜನರಿಂದ ಬಳಸಲಾಗುತ್ತಿರುವ ಬಳಕೆಗೆ ಸುಲಭವಾದ ಹಾಗು ಉಚಿತವಾದ ಹರಟೆಯ ಹೊಡೆಯುವ ಗ್ರಾಹಕವಾಗಿದೆ. ಏಐಎಮ್, ಎಮ್‌ಎಸ್‌ಎನ್, ಯಾಹೂ, ಹಾಗು ಬಹಳಷ್ಟು ಹರಟೆ ಜಾಲಬಂಧಗಳೊಂದಿಗೆ ಏಕಕಾಲಕ್ಕೆ ನೀವು ಸಂಪರ್ಕ ಹೊಂದಬಹುದಾಗಿದೆ. ಭಾರತೀಯ ಭಾಷೆಯ ಅನುವಾದಿಸಲಾದ ಪಿಡ್ಜಿನ್‌ನ ಆವೃತ್ತಿಯನ್ ಪ್ರತಿಯೊಂದು ಭಾಷಾ ಸೀಡಿಯಲ್ಲಿಯೂ ಸಹ ಒಳಗೊಳ್ಳಿಸಲಾಗಿದೆ.
| |
| |
| ಸನ್‌ಬರ್ಡ್ ಕ್ಯಾಲೆಂಡರ್ ಅನ್ವಯಿಕವೆಂದರೇನು ?
|
| ಉತ್ತರ: ಮೋಝಿಲ್ಲಾ ಸನ್‌ಬರ್ಡ್ ಒಂದು ಕ್ರಾಸ್-ಪ್ಲಾಟ್‌ಫಾರ್ಮ್ ಕ್ಯಾಲೆಂಡರ್ ಅನ್ವಯಿಕವಾಗಿದ್ದು, ಮೋಝಿಲ್ಲಾ ಟೂಲ್‌ಕಿಟ್‌ನ ಮೇಲೆ ನಿರ್ಮಿತಗೊಂಡಿದೆ. ಬಳಕೆದಾರರಿಗೆ ಸಂಪೂರ್ಣ ಸವಲತ್ತನ್ನು ಹೊಂದಿರುವ ಹಾಗು ಬಳಕೆಗೆ ಸುಲಭವಾಗಿರುವಂತಹ ಕ್ಯಾಲೆಂಡರ್ ಅನ್ವಯಿಕವಾಗಿದ್ದು, ಇದನ್ನು ನೀವು ಜಗತ್ತಿನಾದ್ಯಂತ ಬಳಸಬಹುದಾಗಿದೆ. ಇದು ಸಂಪೂರ್ಣವಾಗಿ ಪ್ರತ್ಯೇಕವಾಗಿದೆ: ಇದಕ್ಕೆ ಬೇರಾವುದೆ ಅನ್ವಯಿಕಗಳ ಅಗತ್ಯವಿರುವುದಿಲ್ಲ, ಆದರೆ ಬೇರಾವುದೆ ಕ್ರಮವಿಧಿಗಳೊಂದಿಗೆ ಹೊಂದಿಕೊಳ್ಳುವುದಿಲ್ಲ. ಸ್ಥಳೀಯ ಭಾಷೆಯ ಆವೃತ್ತಿಯ ಮೋಝಿಲ್ಲಾ ಸನ್‌ಬರ್ಡ್ ಅನ್ನು ಪ್ರತಿಯೊಂದು ಭಾಷಾ ಸೀಡಿಯಲ್ಲಿಯೂ ಸಹ ಒಳಗೊಳ್ಳಿಸಲಾಗಿದೆ.
| |
| |
| ಸ್ಕ್ರೈಬಸ್ ಎಂದರೇನು ?
|
ಉತ್ತರ: ಸ್ಕ್ರೈಬಸ್ ಒಂದು ಮುಕ್ತ-ಆಕರ ಕ್ರಮವಿಧಿಯಾಗಿದ್ದು "ಮುದ್ರಣ-ಸಿದ್ಧ" ಉತ್ಪನ್ನ ಹಾಗು ಪುಟ ವಿನ್ಯಾಸಕ್ಕೆ ಹೊಸ ಆಯಾಮವನ್ನು ನೀಡುವ ಸಂಯೋಜನೆಯಾದಂತಹ ಇದು ಲಿನಕ್ಸ್/ಯುನಿಕ್ಸ್, ಮ್ಯಾಕ್‌ಓಎಸ್ ಎಕ್ಸ್, ಓಎಸ್/೨ ಹಾಗು ವಿಂಡೋಸ್ ಗಣಕತೆರೆಗಳಲ್ಲಿ ಬಳಸಲಾಗುವ ಪ್ರಶಸ್ತಿ-ವಿಜೇತವಾದ ವೃತ್ತಿಪರವಾದ ಪುಟ ವಿನ್ಯಾಸಗಾರವಾಗಿದೆ. ನವೀನವಾದ ಹಾಗು ಬಳಕೆದಾರ ಸ್ನೇಹಿಯಾದ ಸಂಪರ್ಕಸಾಧನವನ್ನು ಹೊಂದಿರುವ ಸ್ಕ್ರೈಬಸ್ ವೃತ್ತಿಪರವಾದ ಪ್ರಕಟಣಾ ಸೌಲಭ್ಯಗಳನ್ನು ಬೆಂಬಲಿಸುತ್ತದೆ, ಅವುಗಳೆಂದರೆ ಸಿಎಮ್‌ವೈಕೆ ಬಣ್ಣ, ವಿಭಜನೆಗಳು, ಐಸಿಸಿ ಬಣ್ಣ ನಿರ್ವಹಣೆ ಹಾಗು ಕುಶಲ PDF ರಚನೆಯಾಗಿವೆ. ಭಾರತೀಯ ಭಾಷೆಯ ಅನುವಾದಿಸಲಾದ ಸ್ಕ್ರೈಬಸ್‌ನ ಆವೃತ್ತಿಯನ್ನು ಪ್ರತಿಯೊಂದು ಭಾಷಾ ಸೀಡಿಯಲ್ಲಿಯೂ ಸಹ ಒಳಗೊಳ್ಳಿಸಲಾಗಿದೆ.
| |
| |
| ಕಂಟೆಂಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಎಂದರೇನು?
|
ಉತ್ತರ: ಕಂಟೆಂಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಎನ್ನುವುದು ಒಂದು ಸಾಮಾನ್ಯವಾದ, ಪ್ರಶಸ್ತವಾದ, ಪ್ರಕ್ರಿಯೆಯಿಂದ-ಚಾಲಿತಗೊಂಡಂತಹ ತಂತ್ರಾಂಶ ಆಧರಿತವಾಗಿದ್ದು , ಇ-ಸಮುದಾಯಗಳ ರೂಪದಲ್ಲಿ ಕಮ್ಯುನಿಟಿ ಇನ್‌ಫಾರ್ಮೇಶನ್ ಸಿಸ್ಟಮ್ಸ್ (CIS) ಅಥವ ಸೋಶಿಯಲ್ ಇನ್‌ಫಾರ್ಮೇಶನ್ ಸಿಸ್ಟಮ್ಸ್ (SIS) ಅನ್ನು ಸ್ಥಾಪಿಸುವ ರಚನೆಯಾಗಿದೆ. ಇದು ಇ-ಸಮುದಾಯಗಳ ಸದಸ್ಯರುಗಳು ಪರಸ್ಪರ ರಚಿಸಲು, ಬಳಸಲು ಹಾಗು ಹಂಚಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸುತ್ತದೆ. ಭಾರತೀಯ ಭಾಷೆಯ ಅನುವಾದಿಸಲಾದ ಸಿಎಮ್‌ಎಸ್‌ನ ಆವೃತ್ತಿಯನ್ನು ಪ್ರತಿಯೊಂದು ಭಾಷಾ ಸೀಡಿಯಲ್ಲಿಯೂ ಸಹ ಒಳಗೊಳ್ಳಿಸಲಾಗಿದೆ.
| |
| |
|
|
| |
|
|
| |
|
|
| |
|
|
| |
|
|
| |
|
|
| |
|
|
| |
|
|
| |
|
|
| |
|
|
| |
|
|
| |
|
|
| |